ಜಿಮ್ಮಿ ಕಾರ್ಟರ್ (ಪೂರ್ಣ ನಾಮ: ಜೇಮ್ಸ್ ಅರ್ಲ್ ಕಾರ್ಟರ್ ಜೂನಿಯರ್) (ಜನನ ಅಕ್ಟೋಬರ್ ೧ ೧೯೨೪) ಒಬ್ಬ ಅಮೇರಿಕನ್ ಲೇಖಕ, ರಾಜಕಾರಣಿ. ಡೆಮೊಕ್ರಾಟಿಕ್ ಪಕ್ಷದ ಸದಸ್ಯ. ೧೯೭೭ರಿಂದ ರಿಂದ ೧೯೮೧ರವರೆಗೆ ಅಮೇರಿಕಾ ಸಂಯುಕ್ತ ಸಂಸ್ಥಾನದ ೩೯ನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ೧೯೭೧ರಿಂದ ೧೯೭೫ರವರೆಗೆ ಜಾರ್ಜಿಯಾದ ೭೬ನೇ ಗವರ್ನರ್ ಆಗಿ ಮತ್ತು ೧೯೬೩ರಿಂದ ೧೯೬೭ ರವರೆಗೆ ಜಾರ್ಜಿಯಾ ರಾಜ್ಯದ ಸೆನೆಟರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ರಾಜಕೀಯದಿಂದ ಹೊರಬಂದ ನಂತರ ಕಾರ್ಟರ್ ರಾಜಕೀಯ ಮತ್ತು ಸಾಮಾಜಿಕ ಯೋಜನೆಗಳಲ್ಲಿ ನಿರತರಾಗಿದ್ದರು. ೨೦೦೨ರಲ್ಲಿ, ಕಾರ್ಟರ್ ಸೆಂಟರ್ ಅನ್ನು ಸ್ಥಾಪಿಸುವಲ್ಲಿ ಅವರ ಕೆಲಸಕ್ಕಾಗಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಯಿತು.